ಕರ್ನಾಟಕ ರಾಜ್ಯ ದೇವಾದಿಗರ ಸಂಘ (ನೋಂದಾಯಿತ)

ಸಮಾಜ ಭವನ, ಗಾಂಧಿನಗರ, ಮಂಗಳೂರು-575003 ದ.ಕ ದೂರವಾಣಿ: 0824-2451096

ಇಮೇಲ್: krdevadigarasangha@gmail.com

ದೇವಾಡಿಗ ಸಮಾಜ ಭವನ ಮಣ್ಣಗುಡ್ಡ ಮಂಗಳೂರು

ಕರ್ನಾಟಕ ರಾಜ್ಯ ದೇವಾಡಿಗರ ಸಂಘ ತನ್ನ ನೂತನ ಸೌಧವನ್ನು ಹೊಂದಿದ ¨ಳಿಕ , ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಹಲವು ಆಂತರಿಕ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಸಭಾ ಭವನದಲ್ಲಿ ಸುಮಾರು ೧೨೦೦ ಮಂದಿಗೆ ಆಸೀನರಾಗಲು ಅನುಕೂಲವಾಗುವಂತೆ ಆಸನ ಸೌಲಭ್ಯವನ್ನು ಹೊಂದಿದೆ. ವಿಸ್ತಾರವಾದ ಒಳಾಂಗಣ , ಹವಾ ನಿಯಂತ್ರಿತ ವ್ಯವಸ್ಥೆ , ಪ್ರೇಕ್ಷಕರ ನೋಟಕ್ಕೆ ಅನುಕೂಲಕರವಾದ ವೇದಿಕೆ ಅಲ್ಲದೆ , ಮೇಲ್ಭಾಗದ ಬಾಲ್ಕನಿಯ ಅನುಕೂಲಕರ ವೀಕ್ಷಣೆಗೆ ಸಿದ್ದವಾಗಿದೆ. ಸಂರ್ದಭಿತವಾಗಿ ಬಳಸಬಹುದಾದ ದೊಡ್ಡ ಜನರೇಟರ್ ಗಳು , ವಿಸ್ತಾರವಾದ ಭೋಜನ ಕೊಠಡಿ , ಯೋಗ್ಯ ನಿರ್ವಹಣೆಯಲ್ಲಿ ಇರುವ ಶೌಚಾಲಯ , ಇಕ್ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ , ಸ್ವಚ್ಚ ಪರಿಸರ ಲಭ್ಯವಿದೆ ಮಣ್ಣಗುಡ್ಡ ರಾಜ ರಸ್ತೆಯ ಸನಿಹದಲ್ಲಿ ಕಂಡು ಬರುವ ಸಭಾ ಭವನವು ಮಂಗಳೂರಿನ ಹೃದಯ ಭಾಗದಲ್ಲಿದೆ. ದೇವಾಡಿಗ ಸಮಾಜ ಭವನವು ೪೭೮೪ ಚದರ ಅಡಿ ವಿಸ್ತೀರ್ಣ ಆಗಿರುತ್ತದೆ.

Slide 1 Slide 2 Slide 3 Slide 4 Slide 5 Slide 6 Slide 7 Slide 8 Slide 9