ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಎಂದು ಈ ಸಂಘವು ಕರೆಯಲ್ಪಡುವುದು.
ಉದ್ದೇಶಗಳು :
ಸಂಘಟನೆ : ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ದೇವಾಡಿಗರು, ಮೊಯಿಲಿಗಳು , ಶೇರಿಗಾರರು ಎಂದು ಕರೆಯಲ್ಪಡುವರು .
ವಿದ್ಯಾಭಿವೃದ್ಧಿ : ಸಮಾಜದ ಎಲ್ಲಾ ಉನ್ನತಿಗೂ ಅಡಿಗಲ್ಲಾದ ವಿದ್ಯೆಯನ್ನು ಸಮಾಜಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ದೊರೆಯುವಂತೆ ವಿದ್ಯಾಭಿವೃದ್ಧಿ ಮಂಡಳಿಯನ್ನು ರಚಿಸಿ ತನ್ಮೂಲಕ ವಿದ್ಯಾರ್ಥಿಭವನ , ವಾಚನಾಲಯ , ವಿದ್ಯಾಲಯ , ವೃತ್ತಿಪರ ವಿದ್ಯಾಲಯ , ತಾಂತ್ರಿಕ ಶಿಕ್ಷಣ ವಿದ್ಯಾಲಯ , ರಾತ್ರಿ ಶಾಲೆ , ವಯಸ್ಕರ ಶಿಕ್ಷಣ ಕೇಂದ್ರ ಇತ್ಯಾದಿಗಳನ್ನು ಸ್ಥಾಪಿಸಿ ಸಮಾಜದವರ ಮಕ್ಕಳ ವಿದ್ಯಾವಂತರಾಗುವAತೆ ಪ್ರೋತ್ಸಾಹಿಸುವುದು.
ಧಾರ್ಮಿಕ ಸುಧಾರಣೆ : ಸಮಾಜ ಬಾಂಧವರಲ್ಲಿ ಧಾರ್ಮಿಕ ಜ್ಞಾನವು ವೃದ್ಧಿಗೊಂಡು ಸಮಾಜದ ಜನ ಜೀವನವು ವಿಕಾಸ ಹೊಂದಿ ನೈತಿಕ ಮಟ್ಟವು ಉಚ್ಚತಮವಾಗುವಂತೆ ಸದ್ಗಂಥ್ರಗಳ ಸಂಚಯ , ಧರ್ಮೋಪದೇಶ , ಭಾಷಣ , ಹರಿಕಥೆ , ಭಜನೆ , ಯಕ್ಷಗಾನ , ಸತ್ಸಂಗ , ಗ್ರಂಥ ಪಠಣ ಇತ್ಯಾದಿಗಳನ್ನು ಏರ್ಪಡಿಸುವುದು . ಕರ್ನಾಟಕದಲ್ಲಿ ಭಜನಾ ಮಂದಿರ , ದೇವಸ್ಥಾನಗಳನ್ನು ವ್ಯವಸ್ಥೆಗೊಳಿಸುವುದು.
ಸಾಮಾಜಿಕ ಉನ್ನತಿ :
· ಸಮಾಜದಲ್ಲಿರುವ ಅನಾಥ ಮಕ್ಕಳ , ನಿರ್ಗತಿಕರ , ವೃದ್ಧರ ರಕ್ಷಣೆಗಾಗಿ ಅನಾಥಾಲಯಗಳನ್ನು ಸ್ಥಾಪಿಸಿ ವ್ಯವಸ್ಥೆಗೊಳಿಸುವುದು.
· ಸ್ವಜಾತಿ , ನಿರ್ಗತಿಕ ವ ಅನಾಥ ಯುವತಿಯರ ವಿವಾಹವನ್ನು ವ ಸಾಮೂಹಿಕ ವಿವಾಹ ನಡೆಸುವುದು.
· ನಿರ್ಗತಿಕ , ರೋಗ ಪೀಡಿತರ ಔಷಧೋಪಚಾರ , ಅನಾಥ ಶವ ಸಂಸ್ಕಾರ ವ ಗೈರೆ ಸಮಾಜ ಸೇವಾ ಕಾರ್ಯವನ್ನೆಸಾಗಿಸುವುದು.
· ವ್ಯಾಯಾಮ ಶಾಲೆಗಳನ್ನು ತೆರೆದು , ಸಮಾಜದ ಯುವಕರು ದೃಢಕಾಯ , ಆರೋಗ್ಯಶಾಲಿ , ಶಿಸ್ತುಯುಕ್ತ , ದೇಶ ಪ್ರೇಮಿ ಪ್ರಜೆಗಲಾಗುವಂತೆ ಪ್ರೋತ್ಸಾಹಿಸುವುದು.
· ಸಮಾಜ ಬಾಂಧವರಲ್ಲಿ ನಡೆಯತಕ್ಕ ಉತ್ಸವ , ಮದುವೆ ಇತ್ಯಾದಿ ಶುಭಕಾರ್ಯಗಳ ಸಮಯದಲ್ಲಿ ಜನರ ರಕ್ಷಣೆ , ಶಿಸ್ತುಪಾಲನೆ ವ ಇತರ ಸಂದಿಗ್ಧ ಸವiಯದಲ್ಲಿ ಜನರ ರಕ್ಷಣೆ , ಶಿಸ್ತುಪಾಲನೆಗಳ ಬಗ್ಗೆ ಯುವಕ ಯುವತಿಯರ ಸೇವಾದಳವನ್ನೇರ್ಪಡಿಸುವುದು.
· ತನ್ನ ಸಮಾಜದ ರೀತಿನೀತಿಗಳನ್ನು ಸುಧಾರಿಸಿ ಸಮಾಜಸೇವೆ , ದೇಶ ಸೇವೆಗೋಸ್ಕರ ದುಡಿಯುವ ವ್ಯಕ್ತಿಗಳನ್ನು ತರಬೇತುಗೊಳಿಸುವುದು. ಸಂದಿಗ್ದ ಪರಿಸ್ಥಿಯಲ್ಲಿ ದೇಶ ರಕ್ಷಣೆ ಸಂದರ್ಭದಲ್ಲಿ ಸರಕಾರದೊಂದಿಗೆ ಸ್ಪಂದಿಸುವುದು.
· ನಮ್ಮ ದೇಶದ ಘಟನೆಗನುಸರಿಸಿ , ಸಾಮಾಜಿಕ ಸುಧಾರಣೆಗೆ ಅನುಕೂಲವಾಗುವಂತೆ, ಅನ್ಯ ಸಮಾಜದವರೊಡನೆ ಸಖ್ಯ ಸಹಕಾರ ಬೆಳೆಯುವಂತೆ ಪರಿಷತ್ತುಗಳನ್ನು ಚರ್ಚಾಕೂಟಗಳನ್ನು ಮತ್ತು ಸಭೆಗಳನ್ನು ಏರ್ಪಡಿಸುವುದು.
· ಸಮಾಜಕ್ಕೆ ದುಡಿದು ಹಿರಿಯ ಕಾರ್ಯಕರ್ತರು , ಸಮಾಜ ಸೇವಕರನ್ನು ಗುರುತಿಸಿ ಪ್ರತಿ ವರ್ಷ ಅವರುಗಳಿಗೆ ಗೌರವಿಸುವುದು.
· ನಮ್ಮ ಸಮಾಜದ ಮೂಲ ಕಸುಬಾಗಿರುವ ಚರ್ಮ ವಾದ್ಯ ಅಂದರೆ ಡೋಲು ಚೆಂಡೆ , ಮದ್ದಳೆ, ತಂಪಟ , ಉರುಳೆ ಹಾಗೂ ನಾದಸ್ವರ, ಸಾಕ್ಸೊಪೋನ್ ಮುಂತಾದ ವಾದ್ಯಗಳನ್ನು ನುಡಿಸಲು ಹಾಗೂ ಕಲಿಯಲು ಯುವಕರಿಗೆ ಉತ್ತೇಜನವನ್ನು ನೀಡುವುದು. ಅಂತಹ ವೃತ್ತಿಯಲ್ಲಿ ನುರಿತ ಪದಾರ್ಥಿಗಳನ್ನು ನೇಮಿಸಿ ಅವರಿಂದ ಕಲಿಸುವುದು, ಅಂತಹವರಿಗೆ ಸೇವಾ ಭತ್ತೆಯನ್ನು ನೀಡಿವುದು. ನಮ್ಮ ಯುವಕ ಯುವತಿಯರಿಗೆ ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳವನ್ನು ಕಲಿಸಲು ವೇದಿಕೆಯನ್ನು ನಿರ್ಮಿಸುವುದು.
ಸಾಂಪತ್ತಿಕ ಏಳಿಗೆ :
· ಸಮಾಜದ ಬಾಂಧವರಲ್ಲಿ ಕೃಷಿ ಕೈಗಾರಿಕೆ , ವ್ಯಾಪಾರ ಇತ್ಯಾದಿಗಳ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕಲಾಪಗಳನ್ನು ನಡೆಸುವುದು.
· ಚಂದಾ , ಧನ ಸಹಾಯ , ದಾನ , ನಾಟಕ ವಸ್ತು ಪ್ರದರ್ಶನ ವ ಗೈರೆಗಳು ಮತ್ತು ಠೇವಣಿ ವ ಸಾಲಗಳ ಮೂಲಕ ಸಂಘದ ಉದ್ದೇಶಗಳನ್ನು ನೆರವೇರಿಸುವರೆ ಧನ ಸಂಗ್ರಹಿಸುವುದು.
· ಸಂಘದ ಉದ್ದೇಶ ಪೂರ್ತಿಗಾಗಿ ಅಗತ್ಯವಿರುವ ಸ್ಥಿರ ಚರ ಸೊತ್ತುಗಳನ್ನು ಸಂಪಾದಿಸುವುದು.
ಯುವಜನಾಭಿವೃದ್ಧಿ : ಯುಜನರ ಅಭಿವೃದ್ಧಿಗಾಗಿ ಯುವಕ ಸಂಘಟನೆಗಳನ್ನು ರಚಿಸಿ, ಯುವಜನರ , ದೈಹಿಕ , ನೈತಿಕ , ಶೈಕ್ಷಣಿಕ , ಬೌದ್ಧಿಕ . ಸಾಂಸ್ಕೃತಿಕ ಮತ್ತು ಆರ್ಥಿಕಾಭಿವೃದ್ಧಿಗೆ ಬೇಕಾದ ಕಾರ್ಯಕ್ರಮಗಳವನ್ನೆಸಗುವುದು.
ಮಹಿಳಾ ಅಭಿವೃದ್ಧಿ : ಸಮಾಜದ ಮಹಿಳೆಯರ ನೈತಿಕ , ಸಾಮಾಜಿಕ , ದೈಹಿಕ , ಬೌದ್ಧಿಕ , ಶೈಕ್ಷಣಿಕ , ಆರ್ಥಿಕ , ಸಾಂಸ್ಕೃತಿಕ ಮತ್ತು ರಾಜಕೀಯ ಅಭಿವೃದ್ಧಿಗಾಗಿ ಮತ್ತು ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಮಹಿಳಾಭಿವೃದ್ಧಿ ಮಂಡಳಿಯರ ಅಭಿವೃದ್ಧಿಗಾಗಿ ಬೇಕಾದ ಕಾರ್ಯಕ್ರಮಗಳನ್ನು ನಡೆಸುವುದು.
ಸಾಂಸ್ಕçತಿಕ ಅಭಿವೃದ್ಧಿ : ಸಮಾಜ ಬಾಂಧವರ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಲಲಿತಾ ಕಲೆ , ಸಾಹಿತ್ಯ , ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಗಳಿಗೆ ಬೇಕಾದ ಪ್ರೋತ್ಸಾಹ ನೀಡುವುದು.
ಕ್ರೀಡಾಭಿವೃದ್ಧಿ : ಸಮಾಜ ಬಾಂಧವರಲ್ಲಿ ಕ್ರೀಡಾ ಅಭಿರುಚಿಯುಂಟಾಗಿ ಯುವ ಜನಾಂಗದವರು ಉತ್ತಮ ಕ್ರೀಡಾಪಟುಗಳಾಗುವಂತೆ ಕ್ರೀಡಾ ವಿಭಾಗವನ್ನು ಸಂಘಟಿಸಿ ಪ್ರೋತ್ಸಾಹಿಸುವುದು. ರಾಜ್ಯ ಅಂತರ್ ರಾಜ್ಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಕ್ರೀಡಾಳುಗಳಿಗೆ ಗೌರವಿಸಿ ಪ್ರೋತ್ಸಾಹಿಸುವುದು. ಒಂದು ದಿನದ ರಾಜ್ಯ ಮಟ್ಟದ ದೇವಾಡಿಗರ ವಾರ್ಷಿಕ ಕ್ರೀಡಾ ಕೂಟ ನಡೆಸುವುದು . ಈ ಬಗ್ಗೆ ಉಪಸಂಘ ಹಾಗೂ ಜಾತಿಯ ಬೇರೆ ಬೇರೆ ಸ್ಥಳಗಳಲ್ಲಿರುವ ಸಂಘಗಳ ಜಂಟಿ ಸಭೆಯನ್ನು ನಡೆಸುವುದು.